by 27 on | 2025-04-02 11:09:18
Share: Facebook | Twitter | Whatsapp | Linkedin | Visits: 466
ಆಯ್ ಕ್ಯೂ ಎ ಸಿ (IQAC) ಉಪಕ್ರಮದಡಿ ಸಂಸ್ಕೃತಿಕ ಸಮಿತಿ, ಮಹಿಳಾ ಸಬಲೀಕರಣ ಘಟಕ ಮತ್ತು ಬಿ.ಕಾಂ. ವಿಭಾಗ ಸಂಯುಕ್ತವಾಗಿ "ಎ .ಎಸ್. ಪಿ ಉಗಾದಿ ಉತ್ಸವ 2025" ಕಾರ್ಯಕ್ರಮವನ್ನು ವಿಜೃಂಭಣೆಯಿಂದ 28-03-2025 ರಂದು ಮಹಾವಿದ್ಯಾಲದ ಆವರಣದಲ್ಲಿ ಆಯೋಜಿಸಲಾಯಿತು. ಎಲ್ಲ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಪಾರಂಪರಿಕ ವೇಷಭೂಷಣದಲ್ಲಿ ಭಾಗವಹಿಸಿದರು. ಮಹಿಳೆಯರು ಕರ್ನಾಟಕದ ಸಾಂಸ್ಕೃತಿಕ ಸಂಕೇತವಾಗಿರುವ ಇಳಕಲ್ ಸೀರೆ ಧರಿಸಿ ಕಂಗೊಳಿಸಿದರು, ಪುರುಷರು ಅಂಗಿ ಮತ್ತು ಪಂಚೆ ತೊಟ್ಟು ಮಿಂಚಿದರು . ಪೀಳಿಗೆಯಿಂದ ಪೀಳಿಗೆ ನಮ್ಮ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ಕಾಲೇಜನ್ನು ಹಳ್ಳಿಯ ಶೈಲಿಯಲ್ಲಿ ಅಲಂಕರಿಸಲಾಯಿತು. ಹೊಲಗುಂಡಿಗಳು, ಬಣ್ಣಬಣ್ಣದ ಮಂಡಪ್ಪ, ತೋರಣಗಳು, ಹಸಿರು ಪಲ್ಲಕ್ಕಿ, ಹಗ್ಗದ ಸ್ವಾಗತದ್ವಾರ ಇವೆಲ್ಲುವುಗಳಿಂದ
ಮಹಾವಿದ್ಯಾಲದ ಪರಿಸರ ಕಂಗೊಳಿಸಿತು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಚಿದಾನಂದ ಹಿರೇಮಠ ಸ್ವಾಮೀಜಿ ಭಾಗವಹಿಸಿದರು. ತಮ್ಮ ಆಧ್ಯಾತ್ಮಿಕ ಪ್ರವಚನದ ಮೂಲಕ, ಅವರು ವಿದ್ಯಾರ್ಥಿಗಳಿಗೆ ಜೀವನದ ನೈತಿಕ ಮೌಲ್ಯಗಳು, ಸಂಸ್ಕೃತಿಯ ಮಹತ್ವ ಮತ್ತು ಧರ್ಮದ ತಾತ್ತ್ವಿಕ ಅಂಶಗಳನ್ನು ವಿವರಿಸಿದರು. ಉಗಾದಿ ಹಬ್ಬ ಹೊಸ ವರ್ಷಾರಂಭದ ಸಂಕೇತವಾಗಿದ್ದು, ಇದು ಭವಿಷ್ಯದಲ್ಲಿನ ಸದುದ್ದೇಶಗಳಿಗಾಗಿ ಉತ್ತಮ ಸಮಯ ಎಂದು ಸ್ವಾಮೀಜಿಯವರು ತಮ್ಮ ಉಪನ್ಯಾಸದಲ್ಲಿ ಉಲ್ಲೇಖಿಸಿದರು.
ಈ ಮಹಾ ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಿ.ಎಸ್. ಬೆಳಗಲಿ ವಹಿಸಿಕೊಂಡರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ರಶ್ಮಿ ಎಸ್. ಪಾಟೀಲ್, ಶ್ರೀ ವಿ.ಎಸ್. ತಳವಾರ (ವಾಣಿಜ್ಯ ವಿಭಾಗದ ಮುಖ್ಯಸ್ಥರು), ಡಾ. ಭಾರತಿ ಮಠ (COE), ವಿದ್ಯಾರ್ಥಿ ಸಂಯೋಜಕರಾದ ಶಶಾಂಕ್ ದೇಸಾಯಿ ಮತ್ತು ಪ್ರೀತಿ ಬಶೋರಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 08/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?