by 1 on | 2024-08-17 14:49:53
Share: Facebook | Twitter | Whatsapp | Linkedin | Visits: 3217
ವಿಜಯಪುರ ನಗರದ ಜಲ ನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹನವನ್ನು ನೆರವೇರಿಸಿ ಮಾತನಾಡಿದ ನಿವೃತ್ತ ಸೈನಿಕರಾದ ಶ್ರೀಯುತ ಸುಭಾಷ್ ಚಂದ್ರ ಚನ್ನಪ್ಪ ಸಜ್ಜನ್ ಅವರು ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ಅಭಿಮಾನ ಬರುವಂತ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಕೊಳ್ಳುವಂತ ಶಿಕ್ಷಣ ತಮಗೆಲ್ಲ ದೊರಕಲಿ ದೇಶದ ಸುಭದ್ರತೆಗೆ ಸೈನಿಕರು ಬಹಳ ಮುಖ್ಯ ಎಲ್ಲ ಮಕ್ಕಳಲ್ಲಿ ಭಾರತೀಯ ಸೈನ್ಯದ ಮೇಲೆ ಅಭಿಮಾನವಿರಲಿ ದೇಶದ ನಾಯಕರಾಗುವದರೊಂದಿಗೆ ಮೊದಲು ದೇಶ ಸೇವಕರಾಗಿ ಈ ಒಂದು ಒಳ್ಳೆಯ ಸಂದೇಶವನ್ನು ಈ ಶಾಲೆಯ ಶಿಕ್ಷಕರಿಂದ ಕಲಿತು ದೇಶದ ಅಭಿಮಾನಿಗಳಾಗಿ ಬೆಳೆಯಿರಿ ಸದೃಢ ಸಮಾಜ ಕಟ್ಟಲು ನಿಮ್ಮಂತ ಮಕ್ಕಳು ಒಳ್ಳೆಯ ಧ್ಯೇಯವನ್ನು ಹೊಂದಿ ನಾಡನ್ನು ಕಾಯುವ ಯೋಧರಾಗಿ ಎಂಬ ಕರೆಯನ್ನು ನೀಡಿದರು ನಂತರ ಮಕ್ಕಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹನೀಯರ ಬಗ್ಗೆ ಮಾತನಾಡಿದರು. ಶಿಕ್ಷಕರಾದ, ಸಂಗನಗೌಡ ಪಾಟೀಲ ಶಿಕ್ಷಕಿಯರಾದ, ಮೋಶಿನಾ ಜಾನೇಕಾಲ್ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಅನೇಕ ಮಹನೀಯರನ್ನು ನೆನೆದು ಭಾಷಣವನ್ನು ಮಾಡಿದರು. ಇದರೊಂದಿಗೆ ಮಕ್ಕಳ ಮನರಂಜನೆ ಕಾರ್ಯಕ್ರಮ ಬಹಳ ಗಮನ ಸೆಳೆಯಿತು. ಎಲ್ಲ ಮಕ್ಕಳು ಅತ್ಯಂತ ಉತ್ಸಾಹದಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿತ್ತು.
ಕಿರು ನಾಟಕಗಳ ಮೂಲಕ, ನೃತ್ಯಗಳ ಮೂಲಕ ಸ್ವಾತಂತ್ರ್ಯ ಪೂರ್ವದ ವಾತಾವರಣವನ್ನು ಮಕ್ಕಳು ಮತ್ತೊಮ್ಮೆ ಎಲ್ಲರ ಕಣ್ಣ ಮುಂದೆ ತಂದರು. ಪ್ರಾಚಾರ್ಯರಾದ ಶ್ರೀಯುತ ದರ್ಶನ್ ಹುನಗುಂದ್ ಮಾತನಾಡಿ ದೇಶದ ಬಗ್ಗೆ ಅಭಿಮಾನವಿರಲಿ. ನೀವೆಲ್ಲರೂ ಶಿಸ್ತಿನ ಸಿಪಾಯಿಗಳಾಗಿರಿ ಎಂದು ಮಕ್ಕಳಿಗೆ ಕರೆ ನೀಡಿದರು. ಧ್ವಜಾರೋಹಣ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿತು. ಶಿಕ್ಷಣ ಸಂಯೋಜಕರಾದ ಫರಹದೆಬಾ ಜಹಾಗೀರ್ದಾರ್, ಶ್ರೀ ಸಂಗಮೇಶ್ ಪಟ್ಟಣಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಲ್ಲ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
ಇಂದಿನ ರಾಶಿ ಭವಿಷ್ಯ (01-09-2026)