by 1 on | 2024-07-01 17:46:22 Last Updated by admin on2026-09-07 02:10:47
Share: Facebook | Twitter | Whatsapp | Linkedin | Visits: 323
ಮೂರು ಹೊಸ ಅಪರಾಧ ಕಾನೂನುಗಳು
ಭಾರತೀಯ ನ್ಯಾಯ ಸಂಹಿತೆ-2023 (ಬಿಎನ್‌ಎಸ್) ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 (ಬಿಎನ್‌ಎಸ್‌ಎಸ್) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ-2023 (ಬಿಎಸ್ಎ) ಕಾನೂನುಗಳು ದೇಶಾದ್ಯಂತ ಜುಲೈ 1 ಸೋಮವಾರ ದಿಂದ ಜಾರಿಗೆ ಬರಲಿವೆ.
ಈ ಮೂರೂ ಹೊಸ ಕಾನೂನುಗಳು 2023ರ ಡಿಸೆಂಬರ್‌ನಲ್ಲೇ ಸಂಸತ್ತಿನ ಅನುಮೋದನೆ ಪಡೆದು, ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದುಕೊಂಡಿವೆ.
ಈ ಕಾಯ್ದೆಗಳನ್ನು ಈವರೆಗೂ ಬಳಕೆಯಲ್ಲಿದ್ದ ಭಾರತೀಯ ದಂಡ ಸಂಹಿತೆ-1860(ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ-1973 (ಸಿಆರ್ ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ-1872(ಐಇಎ) ಕಾಯ್ದೆಗಳಿಗೆ ಬದಲಿಯಾಗಿ ಜಾರಿಗೆ ತರಲಾಗುತ್ತಿದೆ.
ಹೊಸ ಕಾಯ್ದೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಕಳೆದ ಎರಡು ತಿಂಗಳಿಂದ ಕೇಂದ್ರ ಸರಕಾರದಿಂದ ಪ್ರಯತ್ನಗಳು ನಡೆದಿವೆ.
ದೆಹಲಿ, ಕೋಲ್ಕತ್ತ, ಗುವಾಹಟಿ ಮತ್ತು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಯಲ್ಲಿ ಸಂಬಂಧಿಸಿದ ಇಲಾಖೆಗಳು, ನ್ಯಾಯಾಂಗ ಇಲಾಖೆಯವರು, ಕಾಯ್ದೆಜಾರಿ ಸಂಸ್ಥೆಗಳು, ಸರಕಾರಿ ವಕೀಲರು, ಜಿಲ್ಲಾಡಳಿತದ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ತಜ್ಞರು, ಕಾನೂನು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕೇಂದ್ರದ ಕಾನೂನು ವ್ಯವಹಾರಗಳ ಇಲಾಖೆ ಕಾರ್ಯಾಗಾರಗಳನ್ನೂ ನಡೆಸಿದೆ.
ನಡೆದಿರುವ ಅಪರಾಧದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು, ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದು ಎಂದು ತಿಳಿಸಿದೆ.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
ಇಂದಿನ ರಾಶಿ ಭವಿಷ್ಯ (01-09-2026)