by 20 on | 2026-02-16 20:30:01
Share: Facebook | Twitter | Whatsapp | Linkedin | Visits: 507
ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮ
ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ. ಇಡಿ) ಜಮಖಂಡಿಯಲ್ಲಿ ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ದಿ. 16-02-2026 ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಬಿ ಎಲ್ ಡಿ ಇ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಉತ್ತಮ ವಡಾಗೋಲೆ ಯವರು ಆಗಮಿಸಿ, ಕನ್ನಡದ ಶ್ರೇಷ್ಠತೆ, ಕನ್ನಡ ಬೆಳೆದಿದ್ದು ಜೈನ ಸಾಹಿತ್ಯದಿಂದ ಹಾಗೂ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ ಜೆ ಜೀರಗಾಳಿ ಯವರು ಸಾಹಿತ್ಯಕ್ಕೆ ಮೂಲ ಆಧಾರ ಭಾಷೆಯಾಗಿದೆ ಹಾಗೂ ಸಾಹಿತ್ಯದ ಬೆಳವಣಿಗೆ ಎಲ್ಲರಿಂದ ಸಾಧ್ಯ ಎಂದು ಅಧ್ಯಕ್ಷಿಯ ನುಡಿಗಳನ್ನು ಹೇಳಿದರು. ಪ್ರಶಿಕ್ಷಣಾರ್ಥಿಗಳಾದ ರಮೇಶ ಗೋಡಚಿ ಹಾಗೂ ಪ್ರಿಯಾಂಕ ಚಿನಗುಂಡಿ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಯೋಗಿಕ ಪಾಠಶಾಲೆಗಳ ಮುಖ್ಯಸ್ಥರಾದ ಪ್ರೊ.ಎಲ್ ಎಮ್ ಮಾರ್ಕಪನಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಾನಂದ ಹಿರೇಮಠ, ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಅಶ್ವಿನಿ ಅನಂತಪೂರ, ದೈಹಿಕ ನಿರ್ದೇಶಕರಾದ ಪ್ರೊ.ಮಹದೇವ ಗಲಬಿ, ಗ್ರಂಥ ಪಾಲಕರಾದ ಪ್ರೊ.ಯಮನಪ್ಪ ಕೋರಿ ಉಪಸ್ಥಿತರಿದ್ದರು.
ಪ್ರಶಕ್ಷಣಾರ್ಥಿಗಳಾದ ದೇವಮ್ಮ ಪ್ರಾರ್ಥನೆ, ಸ್ವಾತಿ ಚಿಂಚಕಂಡಿ ಸ್ವಾಗತ, ಪವನ ಸದಲಗಿ ಪುಷ್ಪಾಪಣೆ, ಶಿವಪ್ರಸಾದ ಹುಣಸಿಕಟ್ಟಿ ಅತಿಥಿಗಳ ಪರಿಚಯ, ಉಮೇಶ ನ್ಯಾಮಗೌಡ ಹಾಗೂ ರೂಪ ಕಂಕನವಾಡಿ ನಿರೂಪಣೆ, ವಿಜಯಕುಮಾರ ಕಾಂಬಳೆ
ವಂದಿಸಿದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
ಇಂದಿನ ರಾಶಿ ಭವಿಷ್ಯ (01-09-2026)