by 31 on | 2025-12-15 18:41:56 Last Updated by 31 on2026-09-06 00:26:04
Share: Facebook | Twitter | Whatsapp | Linkedin | Visits: 210
ವಿಜಯಪುರ ಜಲನಗರದಲ್ಲಿರುವ ಶ್ರೀ ಬಿ ಎಂ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 13 ಡಿಸೆಂಬರ 2025 ರಂದು ಕ್ರೀಡಾ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಜಯಪುರ RTO ಆದ ಶ್ರೀಯುತ ಜಯರಾಜ ಬೃಂಗಿಮಠ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಬಲೂನ್ ಹಾರಿ ಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಬರೀ ಕಲಿಕೆಯಷ್ಟೇ ಮುಖ್ಯ ಅಲ್ಲ. ಅದರ ಜೊತೆಗೆ ಕ್ರೀಡಾ ಚಟುವಟಿಕೆಗಳು ಕೂಡಾ ಮಹತ್ವ ಪೂರ್ಣವಾಗಿವೆ. ಜೀವನದಲ್ಲಿ ಕಷ್ಟ ಪಡಬೇಕು ಗುರುಗಳ ಪದತಲದಲ್ಲಿ ಕುಳಿತು ಶ್ರದ್ಧೆಯಿಂದ ಕಲಿಯಿರಿ ಮುಂದೆ ದೊಡ್ಡ ದೊಡ್ಡ ಹುದ್ದೆಯನ್ನು ಗಳಿಸಿಕೊಳ್ಳಲು ಸುಲಭವಾಗುತ್ತದೆ. ಎಂದು ಹೇಳುತ್ತಾ ನಮ್ಮ ಸ್ವರಕ್ಷಣೆಗಾಗಿ ಕರಾಟೆಯಂತಹ ಕ್ರೀಡೆಗಳನ್ನು ಕಲಿತು ನಿಮ್ಮ ರಕ್ಷಕರು ನೀವೇ ಆಗಿರಿ. ಎಂದು ಕರೆ ನೀಡಿದರು. ಬಿ ಎಲ್ ಡಿ ಇ ಸಂಸ್ಥೆಯ ದೈಹಿಕ ವಿಭಾಗದ ನಿರ್ದೇಶಕರಾದ ಶ್ರೀಯುತ. ಎಸ್ ಎಸ್ ಕೋರಿಯವರು ಮಾತನಾಡುತ್ತಾ ಸದೃಢ ಶರೀರದಲ್ಲಿ ಸದೃಢ ಮನಸ್ಸಿರುವುದು. ಅದಕ್ಕಾಗಿ ವ್ಯಾಯಾಮ ಅಂಗ ಸಾಧನೆಗಳು ಬಹಳ ಮುಖ್ಯ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಸಹ ನಿರ್ದೇಶಕರಾದ ಶ್ರೀ ಕೈಲಾಸ ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ರೀಡೆಯಲ್ಲಿ ಗೆದ್ದಿರುವ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ವಿತರಿಸಲಾಯಿತು. ಮೈದಾನವು ಬಹಳ ಶಿಸ್ತು ಬದ್ಧವಾಗಿ ಕಾಣುತ್ತಿತ್ತು. ಶಾಲೆಯ ಅತ್ಯಂತ ಕ್ರಿಯಾಶೀಲ ವ್ಯಕ್ತಿಗಳಾದ ಹಾಗೂ ದೈಹಿಕ ಶಿಕ್ಷಣದ ಮುಖ್ಯಸ್ಥರಾದ. ಶ್ರೀ ಸಂಗಪ್ಪ ಆಲಮೇಲ ಅವರ ಮಾರ್ಗದರ್ಶನ ಹಾಗೂ ಶ್ರೀಮತಿ ಅಶ್ವಿನಿ ಕುಂದನಗೊಳ್ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಕ್ರಮಬದ್ಧವಾಗಿ ಜರುಗಿದವು. ಈ ಶಾಲೆಯ ಪ್ರಾಚಾರ್ಯರಾದ ಶ್ರೀ ನವೀನ ಜಾರ್ಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಸಂಯೋಜಕರಾದ ಶ್ರೀಮತಿ ಜಯಾ ಗಲಗಲಿ ಹಾಗೂ ಶಾಲೆಯ ಎಲ್ಲ ಸಂಯೋಜಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಕ್ರೀಡಾ ಪ್ರತಿನಿಧಿಗಳಾದ ಕುಮಾರ ಭೂಷಣ ನಂದಿಕೋಲ ಹಾಗೂ ಕುಮಾರಿ ಅನುಶ್ರೀ ಪಾಟೀಲ ಎಲ್ಲಾ ಕ್ರೀಡೆಗಳ ಮುಂದಾಳತ್ವವನ್ನು ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ