by 1 on | 2024-01-22 17:22:41
Share: Facebook | Twitter | Whatsapp | Linkedin | Visits: 382
ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ನೀತಾ ಅಂಬಾನಿ ದಂಪತಿ ಜೊತೆಯಾಗಿ ಬಹುಕೋಟಿ ಮೊತ್ತದ 33 ಕೆ.ಜಿ ತೂಗುವ ವಜ್ರಾಭರಣಗಳನ್ನು ಒಳಗೊಂಡ ಕಿರೀಟ ನೀಡಿದ್ದಾರೆ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇಂದು ಅಯೋಧ್ಯಾ ರಾಮ ಮಂದಿರ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾಯ್ತು. “ನ ಭೂತೋ ನ ಭವಿಷ್ಯತಿ” ಎಂಬAತೆ ನಡೆದ ಈ ಸಮಾರಂಭದಲ್ಲಿ ಹಲವು ವಿವಿಐಪಿಗಳು, ಬಾಲಿವುಡ್ ತಾರೆಯರು ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು, ಖ್ಯಾತ ಉದ್ಯಮಿಗಳು, ಕ್ರಿಕೆಟ್ ತಾರೆಯರು, ದೇಶದ ಮೂಲೆ ಮೂಲೆಯಿಂದ ಬಂದ ಸಾಧುಗಳು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವರದಿಯ ಪ್ರಕಾರ, ಅಯೋಧ್ಯೆಯ ರಾಮ ಮಂದಿರಕ್ಕೆ ಅಂಬಾನಿ ದಂಪತಿ 3 ಕಿರೀಟಗಳನ್ನು ನೀಡಿದ್ದು, 33 ಕೆಜಿ ಚಿನ್ನ ಬಳಸಿ ಈ ಕಿರೀಟವನ್ನು ಮಾಡಲಾಗಿದೆ ಎಂದಿದೆ. ಆದರೆ ಈ ವಿಚಾರದ ಸತ್ಯಾಸತ್ಯತೆಗೆ ಸಂಬAಧಿಸಿದAತೆ ಮಾಧ್ಯಮವೊಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ್ನು ಸಂಪರ್ಕಿಸಿದಾಗ ಈ ವಿಚಾರ ಸತ್ಯಕ್ಕೆ ದೂರವಾದುದು ಎಂದು ತಿಳಿದು ಬಂದಿದೆ.
ಮುಕೇಶ್ ಅಂಬಾನಿ ನೀತಾ ಸೇರಿದಂತೆ ಅವರ ಕುಟುಂಬದ ಯಾರೂ ಕೂಡ ಇಂತಹ ಉಡುಗೊರೆಯನ್ನು ನೀಡಿಲ್ಲ ಎಂದು ರಾಮಜನ್ಮಭೂಮಿ ಖಚಿತಪಡಿಸಿದೆ. ಅಲ್ಲದೇ ದೇಗುಲಕ್ಕೆ ದೇಣಿಗೆ ನೀಡಿದವರ ಲಿಸ್ಟ್ನಲ್ಲಿಯೂ ಇವರ ಹೆಸರಿಲ್ಲ ಎಂದು ತಿಳಿದು ಬಂದಿದೆ. ಇನ್ನು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಅಂಬಾನಿ ಅಪಾರ್ಟ್ಮೆಂಟ್ ಅಂಟಿಲಿಯಾವನ್ನು ಲೈಟಿಂಗ್ಸ್ ಜೊತೆ ಕಲಾತ್ಮಕವಾಗಿ ಸಿಂಗರಿಸಲಾಗಿತ್ತು.
ಆದರೆ ಈ ಅದ್ದೂರಿ ಸಮಾರಂಭದಲ್ಲಿ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಅವರ ಇಡೀ ಕುಟುಂಬವೇ ಭಾಗಿಯಾಗಿತ್ತು, ನೀತಾ ಅಂಬಾನಿ ಹಾಗೂ ಪತಿ ಮುಕೇಶ್ ಅಂಬಾನಿ ಜೊತೆಯಾಗಿ ಆಗಮಿಸಿದರೆ ಇತ್ತ ಇವರ ಪುತ್ರಿ ಇಶಾ ಅಂಬಾನಿ ಪತಿ ಗೌತಮ್ ಪಿರಾಮಲ್ ಜೊತೆ ಆಗಮಿಸಿದ್ದರು. ಹಾಗೆಯೇ ಆಕಾಶ್ ಅಂಬಾನಿ ಪತ್ನಿ ಶ್ಲೋಕ ಅಂಬಾನಿ ಜೊತೆ ಈ ಶುಭ ಕಾರ್ಯಕ್ರಮಕ್ಕೆ ಬಂದಿದ್ದರು. ತಮ್ಮ ಎಂದಿನ ಸಂಪ್ರದಾಯಿಕ ಶೈಲಿಯ ಸಾರಿ ಉಟ್ಟು ಪತಿ ಜೊತೆ ಆಗಮಿಸುವ ಮೂಲಕ ನೀತಾ ಅಂಬಾನಿ ಗಮನ ಸೆಳೆದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 08/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?