by 1 on | 2024-01-22 15:05:00
Share: Facebook | Twitter | Whatsapp | Linkedin | Visits: 329
ಜೆಡಿಎಸ್ ನಾಯಕರು ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಅವರನ್ನು ನಿನ್ನೆ ರವಿವಾರ ಭೇಟಿ ಮಾಡಿ, ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಎಪಿ ರಂಗನಾಥ ಅವರನ್ನು ಕಣಕ್ಕಿಳಿಸಲು ಉಭಯ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಬಿಜೆಪಿ ನಾಯಕರ ಜತೆ ಜೆಡಿಎಸ್ ನಾಯಕರು ಮೈತ್ರಿ ಘೋಷಣೆ ಮಾಡಿಕೊಂಡಿದ್ದರು. ಬಳಿಕ ಬಿಜೆಪಿ ರಾಜ್ಯ ನಾಯಕರು ಅನೌಪಚಾರಕವಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು.
ರವಿವಾರ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಭೆ ನಡೆಸುವ ಮೂಲಕ ಮೈತ್ರಿಗೆ ರಾಜ್ಯ ಮಟ್ಟದಲ್ಲಿ ಮುನ್ನುಡಿ ಬರೆದಿದ್ದಾರೆ. ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಮಾತ್ರವಲ್ಲದೆ, ವಿಧಾನ ಪರಿಷತ್ ಚುನಾವಣೆ ಕುರಿತೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸುವುದು, ಲೋಕಸಭೆ ಟಿಕೆಟ್ ಹಂಚಿಕೆ ಹಾಗೂ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಭೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಪ್ರಥಮ ಹಂತದ ಸಭೆ ನಡೆಸಿದ್ದೇವೆ. ಶಿಕ್ಷಕರ ಕ್ಷೇತ್ರದ ಉಪಚುನಾವಣೆ, ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಚರ್ಚಿಸಲಾಗಿದೆ. ಈ ಸಭೆಯ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್‌ಗೆ ತಲುಪಿಸಲಾಗುವುದು. ಮುಂಬರುವ ಲೋಕಸಭೆ ಚುನಾವಣೆಗೆ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಿಂದಲೇ ಸಂದೇಶವನ್ನು ನೀಡಲಿದ್ದೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಕೈ ಬಲಪಡಿಸಲು ಉಭಯ ಪಕ್ಷಗಳು ಒಟ್ಟಾಗಿ ಹೋಗುತ್ತೇವೆ. ರಾಜ್ಯದಲ್ಲಿ ಕೆಟ್ಟ ಸರ್ಕಾರವಿದೆ ಅದು ತೊಲಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮುಖಂಡರಾದ ಡಿ.ವಿ.ಸದಾನಂದಗೌಡ, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಗೋವಿಂದ್ ಕಾರಜೋಳ, ಜೆಡಿಎಸ್ ಮುಖಂಡರಾದ ಜಿ.ಟಿ.ದೇವೇಗೌಡ, ಕೆ.ಎ.ತಿಪ್ಪೇಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಬೋಜೇಗೌಡ ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 08/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?