by 28 on | 2025-08-18 16:27:33 Last Updated by 28 on2026-09-07 02:10:21
Share: Facebook | Twitter | Whatsapp | Linkedin | Visits: 422
ಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ – ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ "ನಷಾ ಮುಕ್ತ ಭಾರತ ಅಭಿಯಾನ್ – 2025" ಜಾಗೃತಿ ಕಾರ್ಯಕ್ರಮ
ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ರಾಷ್ಟ್ರೀಯ ಸೇವಾ ಯೋಜನೆ ಘಟಕವು "ನಷಾ ಮುಕ್ತ ಭಾರತ ಅಭಿಯಾನ್ – 2025" ಅಡಿಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 18 ಆಗಸ್ಟ್ 2025 ರಂದು ಯಶಸ್ವಿಯಾಗಿ ಆಯೋಜಿಸಿತು.
ಈ ಅಭಿಯಾನವು ಯುವಜನತೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ನಶಾಮುಕ್ತ ಸಮಾಜ ನಿರ್ಮಿಸಲು ಪ್ರಧಾನ ಉದ್ದೇಶ ಹೊಂದಿದೆ.
ಕಾರ್ಯಕ್ರಮವು ಭಕ್ತಿಗೀತೆ ಮೂಲಕ ಆರಂಭವಾಗಿ, ನಂತರ ಅತಿಥಿಗಳ ಸ್ವಾಗತ, ದೀಪ ಪ್ರಜ್ವಲನೆ, ಅತಿಥಿಗಳ ಭಾಷಣದ ಮೂಲಕ ಸಾಗಿತು. ಪ್ರೇಮಾ ಕಂಬಳಿ (4ನೇ ಸೆಮಿಸ್ಟರ್ B.Sc. ನರ್ಸಿಂಗ್) ಅವರು ಭಕ್ತಿಗೀತೆಗೈದರು ಮತ್ತು ನಂದಿನಿ ಚವಾಣ್ (6ನೇ ಸೆಮಿಸ್ಟರ್ B.Sc. ನರ್ಸಿಂಗ್) ಅವರು ಸ್ವಾಗತ ಭಾಷಣವನ್ನಿತ್ತರು.
ಶ್ರೀ ಜೆ.ಎ. ವಾಘಮೋರೆ (ASI, ತಿಕೋಟಾ ಪೊಲೀಸ್ ಠಾಣೆ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಅವರು ಮಾದಕ ವಸ್ತುಗಳನ್ನು ಉಪಯೋಗಿಸಬೇಡಿ ಎಂಬ ಕಿವಿಮಾತು ನೀಡಿದರು ಮತ್ತು ಮಾದಕ ವ್ಯಸನದಿಂದ ದೇಹ, ಮನಸ್ಸು ಮತ್ತು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿಸಿದರು.
ಪ್ರೊ. ಡಾ. ಪ್ರಕಾಶ್ ಸಿದ್ದಾಪೂರ, ಪ್ರಾಚಾರ್ಯರು, ಅವರು ಅಧ್ಯಕ್ಷತೆಯನ್ನು ವಹಿಸಿ ಮುಖ್ಯ ಅತಿಥಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ಅವರು ನಷಾ ಮುಕ್ತ ಅಭಿಯಾನದ ಮಹತ್ವವನ್ನು ವಿವರಿಸಿ, ಇದು ಕೇವಲ ಸರ್ಕಾರದ ಯೋಜನೆ ಮಾತ್ರವಲ್ಲದೆ, ಸಾಮಾಜಿಕ ಚಳವಳಿಯೂ ಆಗಿರುವುದಾಗಿ ಹೇಳಿದರು.
ಕಾರ್ಯಕ್ರಮವು "ನಶೆ ಇಲ್ಲದ ಭಾರತ, ಆರೋಗ್ಯವಂತ ಸಮಾಜ" ಎಂಬ ಘೋಷಣೆಯೊಂದಿಗೆ ಯಶಸ್ವಿಯಾಗಿ ಕೊನೆಗೊಂಡಿತು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
ಇಂದಿನ ರಾಶಿ ಭವಿಷ್ಯ (01-09-2026)