by 30 on | 2025-07-10 11:13:33
Share: Facebook | Twitter | Whatsapp | Linkedin | Visits: 246
ದಿನಾಂಕ 07.07.2025 ರಂದು ಬಿ ಎಲ್ ಡಿ ಈ ಡಿಮ್ಡ್ ವಿಶ್ವವಿದ್ಯಾಲಯ ಶ್ರೀ. ಬಿ ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಷ-ಕಿರಣ ವಿಭಾಗದಲ್ಲಿ ನೂತನವಾಗಿ ( GE CT Scan 32 Slice ) ಜಿಈ ಸಿಟಿ ಸ್ಕ್ಯಾನ್ ಯಂತ್ರವನ್ನು ಅನುಷ್ಠಾಪನೆ ಮಾಡಲಾಯಿತು . ಈ ಸಮಾರಂಭಕ್ಕೆ ವಿಶ್ವವಿದ್ಯಾಲಯದ ಸಮಕುಲಪತಿಗಳಾದ ಡಾ. ವೈ ಎಂ ಜಯರಾಜ ರವರು ಉದ್ಘಾಟನೆಯನ್ನು ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಉಪಕರಣವು ರೋಗಿಯ ರೋಗ ತಪಾಸಣೆ ಮತ್ತು ರೋಗ ನಿರ್ಣಯ ಮಾಡುವಲ್ಲಿ ಬಹಳ ಉಪಯುಕ್ತವಾದ ಸಾಧನವಾಗಿದೆ. ಈ ಉಪಕರಣದ ಸಹಾಯದಿಂದ ಕೋವಿಡ-19 ದಿನಗಳಲ್ಲಿ ರೋಗದ ಭೀಕರತೆಯನ್ನು ಅರಿಯುಲು ಅರಿಯಲು ಬಹಳ ಸಹಾಯಕಾರಿಯಾಗಿರುತ್ತದೆ. ಈ ಒಂದು ಸೇವೆಯ ಬಗ್ಗೆ ಎಲ್ಲಾ ಸಿಬ್ಬಂದಿ ವರ್ಗದವರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರ ಜೊತೆಗೆ ಈ ಒಂದು ಯಂತ್ರದ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು, ಜೊತೆಗೆ ಪ್ರಾಚಾರ್ಯರಾದ ಡಾ. ಅರವಿಂದ ವಿ. ಪಾಟೀಲ ರವರು ಮಾತನಾಡುತ್ತಾ ಇನ್ನೂ ಅತ್ಯುನ್ನತವಾದ (GE CT Scan 125 slice ) ಸಿಟಿ ಸ್ಕ್ಯಾನ್ ಉಪಕರಣವನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಅನುಷ್ಠಾಪನೆ ಮಾಡಲಾಗಿದೆ ಈ ಉಪಕರಣದ ಮೂಲಕ ಕಾರ್ಡಿಯಾಕ ಸಿಟಿ (Cardiac CT) ಹಾಗೂ ಉನ್ನತ ಮಟ್ಟದ ತಪಾಸಣೆಗಳು ಮಾಡಬಹುದಾಗಿದೆ ಎಂದು ತಿಳಿಸಿದರು.
ಉಪಕುಲಪತಿಗಳಾದ ಡಾ. ಅರುಣ ಇನಾಮದಾರ ರವರು ಬಿ ಎಲ್ ಡಿ ಈ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಬಿ ಪಾಟೀಲ ಹಾಗೂ ಕುಲಾಧಿಪತಿಗಳಾದ ಶ್ರೀ ಬಿ ಎಂ. ಪಾಟೀಲ ಇವರ ಮಾರ್ಗದರ್ಶನದ ಮೇರೆಗೆ ಬಿ ಎಲ್ ಡಿ ಈ ಕಾಲೇಜು ಹಾಗೂ ಆಸ್ಪತ್ರೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಡಾ. ತೇಜಶ್ವಿನಿ ವಲ್ಲಬ ಡಾ. ವಿಜಯಕುಮಾರ ಕಲ್ಯಾಣಪ್ಪ ಗೋಳ ಡಾ. ರಾಜೇಶ ಹೊನ್ನುಟಗಿ ಡಾ. ಸತೀಶ್ ಪಾಟೀಲ ಹಾಗೂ ಕ್ಷ-ಕಿರಣ ವಿಭಾಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 08/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 07/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?